ಯಶ್ ನ 19 ನೇ ಸಿನಿಮಾ ಟೈಟಲ್ ಘೋಷಣೆ.

Spread the love

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಲ್ಲಿ ಹಬ್ಬ ವಾತಾವರಣ- ಯಶ್ ಅಭಿನಯದ‌ 19ನೇ ಸಿನಿಮಾ ಟೈಟಲ್ ಘೋಷಣೆ- 2025 ಏ.10ಕ್ಕೆ ಸಿನಿಮಾ ತೆರೆಗೆ

KGF 2 ನಂತರ ಕಳೆದ 1ವರ್ಷ 8 ತಿಂಗಳಿಂದ ಯಾವುದೇ ಸಿನಿಮಾದ ಅಪ್ಡೇಟ್ ನೀಡದ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಟೀಮ್ ಇಂದು ಸೀಕ್ರೇಟ್ ನ್ನು ರಿವಿಲ್ ಮಾಡಿದೆ. ಯಶ್ ಅವರು ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ತಮ್ಮ 19 ನೇ ಸಿನಿಮಾ ‘ಟಾಕ್ಸಿಕ್’ ಎಂದು ಅಧಿಕೃತ ಘೋಷಣೆ ಮಾಡಿದ್ದಾರೆ.

ಯಶ್ ರವರ 19 ನೇ ಸಿನಿಮಾ ಟಾಕ್ಸಿಕ್ ಗೆ ಫಿದಾ ಆದ ಅಭಿಮಾನಿ ಬಳಗ. ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡಿರುವ ಯಶ್ ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಹೆಚ್ಚು ಮಾಡಿದ್ದಾರೆ.

ರಾಜ್ಯಾದ್ಯಂತ ಯಶ್ ಅಭಿಮಾನಿಗಳಲ್ಲಿ ಸಂತಸಮನೆ ಮಾಡಿದ್ದು, ಯಶ್ ಅವರ 19ನೇ ಟೈಟಲ್ ಲಾಂಚ್ kvn ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ನಲ್ಲಿ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರಲಿದೆ. 2025ರ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ಘೋಷಣೆ ಮಾಡಿದೆ.

Related posts

Leave a Comment