ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ರೋಗಿಗಳ ಪರದಾಟ… ಐಸಿಯು ನಲ್ಲಿ ರೋಗಿಗಳ ಪೋಷಕರಲ್ಲಿ ಆತಂಕ

Spread the love

ಹಾವೇರಿ: ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ ವಿದ್ಯುತ್ ಕೈ ಕೊಟ್ಟಿರುವ ಘಟನೆ ನಡೆದಿದೆ.‌
ಕರೆಂಟ್ ಇಲ್ಲದೆ ‌ಗರ್ಭಿಣಿಯರು, ಶಿಶುಗಳು ರೋಗಿಗಳು ಪರದಾಟ‌ ನಡೆಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು,
ಏಕಾಏಕಿ ವಿದ್ಯುತ್ ಹೋದ ಹಿನ್ನಲೆ ಅವಘಡ ಸಂಭವಿಸಿದೆ. ಇನ್ನೂ ವಿದ್ಯುತ್ ಹೋದ ಹಿನ್ನಲೆ ಜನರೇಟರ್ ಆನ್ ಮಾಡಲು ಹೇಳಿದಾಗ, ಆಸ್ಪತ್ರೆಯಲ್ಲಿ
ಜನರೇಟರ್ ,ಯುಪಿಎಸ್ ಎರಡೂ ಇಲ್ಲದೆ ಶಿಶುಗಳು ಒದ್ದಾಟ ನಡೆಸಿವೆ. ಕರೆಂಟ್ ಇಲ್ಲದ ಕಾರಣ ಐಸಿಯು ನಲ್ಲಿದ್ದ ಮಕ್ಕಳ ಪೋಷಕರು ಆತಂಕಕ್ಕೆ‌ ಒಳಗಾದರು. ಅರ್ಧಗಂಟೆಗೂ‌ ಹೆಚ್ಚು ಕಾಲ ಕತ್ತಲಲ್ಲಿ ಕಾಲ ಕಳೆದ ರೋಗಿಗಳು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಅದೃಷ್ಟವಶಾತ್ ಏನೂ ಅವಘಡ ಸಂಭವಿಸಿಲ್ಲ.

Related posts

Leave a Comment