ದಾಸನನ್ನು ಬಂಧಿಸಿದ ಯಲಹಂಕ ಪೋಲೀಸರು. ಅಷ್ಟಕ್ಕೂ ಬಂಧಿಸಿದ್ದು ಯಾಕೆ ಅಂತಿರಾ ಈ ಸ್ಟೋರಿ ನೋಡಿ…

Spread the love

ಯಲಹಂಕ: ಸೋಷಿಯಲ್ ಮೀಡಿಯಾದಲ್ಲಿ ಹವಾ ಇಟ್ಟಿದ್ದ ದಾಸನನ್ನು ಅರೆಸ್ಟ್ ಮಾಡಲಾಗಿದೆ.
ಮೈತುಂಬ ಗೋಲ್ಡು ಸುತ್ತಲೂ ಹುಡುಗರು, ದೊಡ್ಡ ದೊಡ್ಡವರ ಜೊತೆ ಫೋಟೊದಲ್ಲಿ ಕಾಣೊ ಈತನಿಗೆ ದೊಡ್ಡ ಮಟ್ಟದ ಫಾಲೋವರ್ಸ್ ಇದ್ದಾರೆ. ಇನ್ನೂ ಯಾವಾಗಲು ಸೋಶಿಯಲ್ ಮೀಡಿಯಾದಲ್ಲಿ ಹವಾ ಇಟ್ಟವನ ಬಂಧನಕ್ಕೆ ಕಾರಣ, ಬೇರೆಯವರ ಪ್ರಾಪರ್ಟಿ ಗಲಾಟೆ ನಡುವೆ ಯುವಕರ ಕಳುಹಿಸಿಕೊಟ್ಟ ಆರೋಪ ಹಿನ್ನಲೆ ಬಂಧನ ಮಾಡಲಾಗಿದೆ. ಮಹಿಳೆ ಹಾಗೂ ಓರ್ವ ವ್ಯಕ್ತಿ ನಡುವೆ ಜಾಗದ ಗಲಾಟೆ ಇತ್ತು. ಆ ಜಾಗದ ವಿಚಾರವಾಗಿ ವ್ಯಕ್ತಿ ದಾಸನ ಸಂಪರ್ಕಿಸಿದ್ದ. ಬಳಿಕ ದಾಸನ ಮೂಲಕ ಹುಡುಗರ ಬಿಟ್ಟು ಮಹಿಳೆಗೆ ಹಲ್ಲೆ ಮಾಡಿರುವ ಆರೋಪ ಮಾಡಿದ್ದಾಳೆ. ಹಲ್ಲೆಗೊಳಗಾದ ಮಹಿಳೆ ದಾಸನ ಯುವಕರು ಎಂದು ಹೇಳಿ ಹಲ್ಲೆ ಮಾಡಿದ್ದಾಗಿ ದೂರು ನೀಡಿದ್ದರು. ಮಹಿಳೆ ದೂರು ನೀಡಿದ ಸಂಬಂಧ ಪ್ರಕರಣ ದಾಖಲಿಸಿಕೊಂಡು,ತನಿಖೆ ಕೈಗೊಂಡು ದಾಸನ ಬಂಧಿಸಿದ್ದಾರೆ.
ಸದ್ಯ ಈತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಯಲಹಂಕ ಪೊಲೀಸರು.

Related posts

Leave a Comment