ಪೋಲೀಸ್ ಠಾಣೆ ಕೂಗಳೆ ದೂರದಲ್ಲೇ ಪದೇ ಪದೇ ಕಳ್ಳತನ. ಬೆಚ್ಚಿಬಿದ್ದ ಗ್ರಾಮಸ್ಥರು..

Spread the love

ದೊಡ್ಡಬೆಳವಂಗಲ: ಬೇಕರಿಗೆ ನುಗ್ಗಿದ ಕಳ್ಳರು ನಗದು ದೋಚಿರುವ ಜೊತೆಗೆ ಮತ್ತೆರಡು ಕಡೆ ಕಳವು ಪ್ರಯತ್ನ ನಡೆಸಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲದಲ್ಲಿ ಸೋಮವಾರ ರಾತ್ರಿ ನಡೆದಿದೆ.
ದಾಬಸ್ ಪೇಟೆ – ದೊಡ್ಡಬಳ್ಳಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದೊಡ್ಡಬೆಳವಂಗಲ ಮುಖ್ಯ ರಸ್ತೆಯಲ್ಲಿರುವ ಐಯ್ಯಂಗಾರ್ ಬೇಕರಿಗೆ ನುಗ್ಗಿದ ಕದೀಮರು ಬಾಗಿಲು ಶೆಟರ್ ಎಳೆದು ನಗದು ದೋಚಿದ್ದು, ನಂತರ ಸುಹಾಸ್ ಮೆಡಿಕಲ್ ಸ್ಟೋರ್ ಹಾಗೂ ಮದ್ಯದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ.

ಇಬ್ಬರು ಕಳ್ಳರು ಮಾಸ್ಕ್, ಗ್ಲೌಸ್ ತೊಟ್ಟು ಕೃತ್ಯ ಎಸಗಿರುವುದು ಬೇಕರಿಗೆ ಅಳವಡಿಸಿರುವ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.

ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಆರ್.ಹರೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಚ್ಚಿಬಿದ್ದ ಗ್ರಾಮಸ್ಥರು
ಕಳೆದ ತಿಂಗಳು ಇದೇ ರೀತಿ ಎರಡು ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದರು‌ ಆ ಘಟನೆ ಮಾಸುವ ಮುನ್ನವೇ ಮತ್ತೆ ಅದೇ ರೀತಿ ಕಳ್ಳತನ ನಡೆದಿದ್ದು, ರಾತ್ರಿ ವೇಳೆ ಮನೆಯಿಂದ ಈಚೆ ಬರಲು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇನ್ನೂ ಪೋಲೀಸ್ ಠಾಣೆ ಕೂಗಳತೆ ದೂರದಲ್ಲೇ ಇದ್ದರೂ ಪದೇಪದೇ ಕಳ್ಳತನ ಆಗುತ್ತಿದ್ದು, ರಾತ್ರಿ ವೇಳೆ ಪೋಲೀಸ್ ಬೀಟ್ ಹೆಚ್ಚಳ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

Leave a Comment