ಮಗ ರೈಲಿಗೆ ಸಿಲುಕಿ ಸಾವು, ರಕ್ಷಣೆ ಮಾಡಲು ಹೋಗಿ ಮಗನಿಲ್ಲದೆ ನಾನೇಕೆ ಎಂದು ತಾಯಿಯೂ ರೈಲಿಗೆ ಸಿಲುಕಿ ಸಾವು….

Spread the love

ಮಗನು ಸೂಸೈಡ್ ಮಾಡಿಕೊಂಡನೆಂದು ತಾಯಿಯೂ ಕೂಡ ಅತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ರೈಲ್ವೆ ಹಳಿಗೆ ಬಿದ್ದು ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುನಾಥ ತೇಲಿ (26),‌ ಸಾವಕ್ಕ ತೇಲಿ (40) ಆತ್ಮಹತ್ಯೆಗೆ ಶರಣಾದ ತಾಯಿ ಮಗ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ನಿವಾಸಿಗಳು ಎನ್ನಲಾಗಿದೆ.

ಕೌಟುಂಬಿಕ ಸಮಸ್ಯೆಯಿಂದ ಮಂಜುನಾಥ್ ತೀವ್ರವಾಗಿ ಮನನೊಂದಿದ್ದ. ಈ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಗೆ ಬಂದಿದ್ದ. ಇದನ್ನು ತಡಿಯಲು ತಾಯಿ ಸಾವಕ್ಕ ತೇಲಿ ಯತ್ನಿಸಿದ್ದಾರೆ. ಆದರೆ ತಾಯಿಯ ಯತ್ನ ವಿಫಲವಾಗಿದೆ.

ಮಗ ಸತ್ತನೆಂದು ತಾಯಿ ಸಾವಕ್ಕಳು ಸಹ ಹಳಿಗೆ ಬಿದ್ದು ದುರ್ಮರಣ ಹೊಂದಿದ್ದಾರೆ. ತಾಯಿ-ಮಗನ ಮೃತದೇಹ ಛಿದ್ರ ಛಿದ್ರವಾಗಿದೆ.

ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಲವಿಗಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Comment