ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ: ಅಪಾರ ಮೌಲ್ಯದ ಚಿನ್ನ ಜಪ್ತಿ

Spread the love

1) 12,55,655 ಮೌಲ್ಯದ 197.43 ಗ್ರಾಂ ತೂಕದ ಚಿನ್ನದ ಕಾಡಾ ಮತ್ತು ಒ-ಲಿಂಕ್‌ಗಳನ್ನು ಬಟ್ಟೆಯೊಳಗೆ ಬಚ್ಚಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಒಬ್ಬ ಭಾರತೀಯ ಪ್ರಯಾಣಿಕನನ್ನು ಬಂಧಿಸಲಾಗಿದೆ.

ಮಾ.18ರಂದು ಕೌಲಾಲಂಪುರದಿಂದ AK-053 ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಒಬ್ಬ ಭಾರತೀಯ ಪ್ರಯಾಣಿಕನನ್ನು ಏರ್ ಇಂಟೆಲಿಜೆನ್ಸ್ ಯುನಿಟ್ (AIU) ನ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

2) ಮಾ.18ರಂದು ಕುವೈಟ್‌ನಿಂದ J9-431 ಫ್ಲೈಟ್‌ನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಒಬ್ಬ ಭಾರತೀಯ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ 12,51,203 ಮೌಲ್ಯದ 196.73 ಗ್ರಾಂ ತೂಕದ ಚಿನ್ನದ ಕಟ್ ಚೈನ್‌ಗಳು, ಬಳೆಗಳು ಮತ್ತು ಪೆಂಡೆಂಟ್‌ಗಳನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

3) ವಿದೇಶಿ ಮೂಲದ ಚಿನ್ನವನ್ನು ಕಚ್ಚಾ ರೂಪದಲ್ಲಿ ರಹಸ್ಯವಾಗಿ ಸಾಗಿಸಲು ಪ್ರಯತ್ನಿಸಿದ ಇಬ್ಬರೂ ಪ್ರಯಾಣಿಕರಿಂದ ಒಟ್ಟು 1167.55 ಗ್ರಾಂ ತೂಕದ ರೂ.74,64,986/- ಮೌಲ್ಯದ ಕಚ್ಚಾ ಚಿನ್ನವನ್ನು ಬೆಂಗಳೂರಿನ ಏರ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮದೀನಾ ಮತ್ತು ಬಹ್ರೇನ್‌ನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂಕ್ತ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Related posts

Leave a Comment