ಪರಿಣಾಮಕಾರಿ ಆಡಳಿತ ನೀಡುವಲ್ಲಿ ಕೇಂದ್ರ ಸರಕಾರ ಯಶಸ್ವಿ

Spread the love

ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರಕಾರ ಪರಿಣಾಮಕಾರಿಯಾಗಿ ಆಡಳಿತ ನಡೆಸುವ ಮೂಲಕ ೯ ವರ್ಷದ ಅವಧಿಯನ್ನು ಪೂರ್ಣಗೊಳಿಸಿದೆ ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಹೇಳಿದರು
ನಗರದ ಸೋಮೇಶ್ವರ ಬಡಾವಣೆಯಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು

೯ ವರ್ಷದ ಆಡಳಿತದಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಕೇಂದ್ರ ಸರಕಾರ ಸಾಧನೆಯನ್ನು ಬಲಪಡಿಸಿದೆ. ಮೋದಿ ಅವರ ದೂರದೃಷ್ಟಿ, ಉತ್ಸಾಹದಿಂದ ಕೆಲಸ. ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಮೊದಲ ಆದ್ಯತೆ ಕೊಟ್ಟಿದ್ದಾರೆ. ವಿಶ್ವದಲ್ಲೇ ಭಾರತ ಬಲಿಷ್ಠ ಸೇನೆಯನ್ನು ಹೊಂದಿದೆ ಜತೆಗೆ ಗುಪ್ತಚರ ಇಲಾಖೆಯೂ ಸಹಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮೋದಿಯವರ ಕಾರ್ಯವೈಕರಿ ವಿಶ್ವ ಮಟ್ಟದಲ್ಲಿ ಭಾರತವನ್ನು ಗುರುತಿಸುವಂತಾಗಿದೆ ಎಂದರು ಜತೆಗೆ ಇತರೆ ದೇಶಗಳ ನಡುವೆ ಅಂತರಾರಾಷ್ಟ್ರೀಯ ಸಂಬAಧ ಉತ್ತಮವಾಗಿದೆ ಎಂದರು

ಕೇಂದ್ರ ಸರಕಾರದ ಆಡಳಿತ ಅವಧಿಯಲ್ಲಿ ಹಲವಾರು ಸವಾಲು, ಸಂಕಷ್ಟ ಬಂದಿದೆ. ೨೦೧೯ ರ ನಂತರ ಕೊವಿಡ್ ಮಹಾಮಾರಿಯಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ವೇಳೆ ಪ್ರಧಾನಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಲಾಕ್ ಡೌನ್ ಘೋಷಣೆ ಮಾಡಿದರು ಜತೆಗೆ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಿಕೆ ಮೂಲಕ ಕರೋನ ಮಹಾಮಾರಿಯನ್ನು ಎದುರಿಸಲಾಗಿದೆ ಎಂದರು. ಗ್ರಾಮೀಣ ಪ್ರದೇಶಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸಿದ್ದಾರೆ. ಜಲಜೀವನ ಮಿಷನ್ ದೇಶವ್ಯಾಪಿ ಜಾರಿಗೊಳಿಸಿ ಗ್ರಾಮೀಣ ಪ್ರದೇಶದ ಪ್ರತಿಮನೆಗೆ ನೀರು ಪುರೈಕೆ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ೯ ವರ್ಷದ ಆಡಳಿತ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂಬ ಅಭಿಪ್ರಾಯವನ್ನು ತಿಳಿಸಿದರು.

ಈ ವೇಳೆ ಜಿಲ್ಲಾ ವಕ್ತಾರೆ ಪುಷ್ಪಶಿವಶಂಕರ್, ಪಕ್ಷದ ಮುಖಂಡರಾದ ನಾಗೇಶ್. ಮುದ್ದಪ್ಪ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಫೋಟೋ;೦೬೦೬ಡಿಬಿಪಿಹೆಚ್‌೦೩ ನಗರದ ಸೋಮೇಶ್ವರ ಬಡಾವಣೆಯಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಧೀರಜ್ ಮುನಿರಾಜು

Related posts

Leave a Comment