ಪ್ರೀತ್ಸೆ ಪ್ರೀತ್ಸೆ ಅಂತ ಪ್ರಾಣ ತಿಂತಿದ್ದ ಪಾಗಲ್ ಪ್ರೇಮಿ, ಕೊನೆಗೆ ಪ್ರಾಣವನ್ನೇ ತೆಗೆದುಬಿಟ್ಟ. ಎಲ್ಲಿ ಅಂತಿರಾ ಈ ಸ್ಟೋರಿ ನೋಡಿ…….

ನಾಪತ್ತೆಯಾಗಿದ್ದ ಶಾಲಾ ವಿದ್ಯಾರ್ಥಿನಿ ಮರ್ಡರ್: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬಾಲಕಿ ಬಲಿ: ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ 2 ದಿನಗಳ ಹಿಂದೆ ಕಾಣೆಯಾಗಿದ್ದ 15 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಮ್ಮಲೂರು ಗ್ರಾಮದ ನಿವಾಸಿನಂದಿತ (15), ಮೃತ ಬಾಲಕಿ. ಬರಗೂರು ಗ್ರಾಮದ ನಿವಾಸಿ ನಿತಿನ್ (23), ಎಂಬ ಯುವಕ ಬಾಲಕಿಯನ್ನ ಅಪಹರಿಸಿ ಕೊಲೈಗೈದಿರುವ ಶಂಕೆ ವ್ಯಕ್ತವಾಗಿದೆ. ಕಳೆದ 15 ದಿನಗಳಿಂದ ಆರೋಪಿ ನಿತಿನ್ ಪ್ರೀತಿಸು ಎಂದು ಬಾಲಕಿ ಹಿಂದೆ ಬಿದ್ದು, ಪೀಡಿಸುತ್ತಿದ್ದ ಎನ್ನಲಾಗಿದೆ. ಪ್ರೀತಿ ನಿರಾಕರಣೆ ಹಿನ್ನೆಲೆ ಬಾಲಕಿಗೆ ಚಾಕುವಿನಿಂದ ತಿವಿದು ಕೊಲೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಕೊಲೆ ನಂತರ ಆರೋಪಿ ನಿತಿನ್ ಆತ್ಮಹತ್ಯೆ ಹೈಡ್ರಾಮ ಮಾಡಿದ್ದಾನೆ.‌ ಸದ್ಯ ಕೋಲಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.…

Read More

ಹಳ್ಳಿ ಹಳ್ಳಿಯಲ್ಲೂ ರಾಮನಾಮ ಜಪ: ಭಜನೆ ಮಾಡಿ ರಾಮ ನಾಮ ಹೇಳಿದ ಗ್ರಾಮಸ್ಥರು….

ಜ.22ಕ್ಕೆ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ: ಪ್ರತಿ ಹಳ್ಳಿಯಲ್ಲೂ ರಾಮನ‌ ಜಪ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ಎಲ್ಲರ ಮನದಲ್ಲೂ ರಾಮನ ನಾಮ ಜಪವಾಗುತ್ತಿದೆ. ದೊಡ್ಡಬಳ್ಳಾಪುರದ ಮಧುರನಹೊಸಹಳ್ಳಿ ಗ್ರಾಮದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಇಂದು ಮುಂಜಾನೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ಶ್ರೀ ಮಾರುತಿ ಭಕ್ತ ಮಂಡಳಿ ವತಿಯಿಂದ ಊರೆಲ್ಲಾ ಭಜನೆ ರಾಮನ‌ನ್ನ ಜಪಿಸಲಾಯಿತು. ಗ್ರಾಮದಲ್ಲಿ ಭಜನಾ ಮೆರವಣಿಗೆ ಮೂಲಕ ದೇವರ ಆರಾಧನೆ ಮಾಡಲಾಯಿತು.

Read More