ಹಿಟ್ ಅಂಡ್ ರನ್ ಗೆ ವ್ಯಕ್ತಿ ಬಲಿ…

ಹಿಟ್ ಅಂಡ್ ರನ್ ಗೆ ಸ್ಥಳದಲ್ಲೇ ವ್ಯಕ್ತಿ ಬಲಿ: ಕಾರಿನ ಚಾಲಕ ಪರಾರಿ ಹಿಟ್ ಅಂಡ್ ರನ್ ಗೆ ಸ್ಥಳದಲ್ಲೇ ವ್ಯಕ್ತಿ ಬಲಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಮಗೊಂಡ್ಲು ಹೋಬಳಿಯ ಮದ್ದೇನಹಳ್ಳಿ ನಿವಾಸಿ ಸಿದ್ದಗಂಗಯ್ಯ (55) ಮೃತ ದುರ್ದೈವಿ. ಹಿಂಬದಿಯಿಂದ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ರಭಸವಾಗಿ ಡಿಕ್ಕಿ ಕಾರು ನಿಲ್ಲಸದೆ ಸ್ಥಳದಿಂದ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಗುದ್ದಿದ ಮೇಲೆ 20 ಅಡಿ ದ್ವಿಚಕ್ರ ವಾಹನವನ್ನು ಎಳೆದೊಯ್ದ ವ್ಯಕ್ತಿಗೆ ಇನ್ನಷ್ಟು ಗಾಯಗೊಳಿಸಲಾಗಿದೆ. ಸದ್ಯ ಶವವನ್ನು ನೆಲಮಂಗಲ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ತ್ಯಾಮಗೊಂಡ್ಲು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Read More

ಬೈಕ್ ಮತ್ತು ಟ್ಯಾಂಕರ್ ನಡುವೆ ಅಪಘಾತ: ಕೂದಳೆಯಲ್ಲಿ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ…

ಬೈಕ್ ಹಾಗೂ ಪೆಟ್ರೋಲ್ ಟ್ಯಾಂಕರ್ ನಡುವೆ ಅಪಘಾತ: ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾದ ಬೈಕ್ ಸವಾರ ಬೈಕ್ ಹಾಗೂ ಪೆಟ್ರೋಲ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿರುವ ಘಟನೆ ನಗರದ ಟಿಬಿ ವೃತ್ತದಲ್ಲಿ ನಡೆದಿದೆ. ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪೆಟ್ರೋಲ್ ಟ್ಯಾಂಕರ್ ಚಕ್ರದ ಕೆಳಗೆ ಬೈಕ್ ಸಿಲುಕಿ ನುಜ್ಜುಗುಜ್ಜಾಗಿದೆ, ಸ್ಥಳಕ್ಕೆ ನಗರ ಠಾಣಾ ಪೊಲೀಸರು ಧಾವಿಸಿ ಸಂಚಾರ ದಟ್ಟಣೆ ನಿಯಂತ್ರಿಸಿ, ಪರಿಶೀಲನೆ‌ ನಡೆಸಿದರು. ಕೆಳಗಿನಜೂಗಾನಹಳ್ಳಿ ನಿವಾಸಿ ಹನುಮಂತರಾಯಪ್ಪ ಎಂಬುವವರಿಗೆ ಅಪಘಾತದಲ್ಲಿ ಗಾಯಗಳಾಗಿವೆ. ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಪೋಲೀಸ್ ಠಾಣೆ ಕೂಗಳೆ ದೂರದಲ್ಲೇ ಪದೇ ಪದೇ ಕಳ್ಳತನ. ಬೆಚ್ಚಿಬಿದ್ದ ಗ್ರಾಮಸ್ಥರು..

ದೊಡ್ಡಬೆಳವಂಗಲ: ಬೇಕರಿಗೆ ನುಗ್ಗಿದ ಕಳ್ಳರು ನಗದು ದೋಚಿರುವ ಜೊತೆಗೆ ಮತ್ತೆರಡು ಕಡೆ ಕಳವು ಪ್ರಯತ್ನ ನಡೆಸಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲದಲ್ಲಿ ಸೋಮವಾರ ರಾತ್ರಿ ನಡೆದಿದೆ.ದಾಬಸ್ ಪೇಟೆ – ದೊಡ್ಡಬಳ್ಳಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದೊಡ್ಡಬೆಳವಂಗಲ ಮುಖ್ಯ ರಸ್ತೆಯಲ್ಲಿರುವ ಐಯ್ಯಂಗಾರ್ ಬೇಕರಿಗೆ ನುಗ್ಗಿದ ಕದೀಮರು ಬಾಗಿಲು ಶೆಟರ್ ಎಳೆದು ನಗದು ದೋಚಿದ್ದು, ನಂತರ ಸುಹಾಸ್ ಮೆಡಿಕಲ್ ಸ್ಟೋರ್ ಹಾಗೂ ಮದ್ಯದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ. ಇಬ್ಬರು ಕಳ್ಳರು ಮಾಸ್ಕ್, ಗ್ಲೌಸ್ ತೊಟ್ಟು ಕೃತ್ಯ ಎಸಗಿರುವುದು ಬೇಕರಿಗೆ ಅಳವಡಿಸಿರುವ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಆರ್.ಹರೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಚ್ಚಿಬಿದ್ದ ಗ್ರಾಮಸ್ಥರುಕಳೆದ ತಿಂಗಳು ಇದೇ ರೀತಿ ಎರಡು ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದರು‌ ಆ ಘಟನೆ ಮಾಸುವ ಮುನ್ನವೇ ಮತ್ತೆ ಅದೇ ರೀತಿ ಕಳ್ಳತನ ನಡೆದಿದ್ದು, ರಾತ್ರಿ ವೇಳೆ…

Read More

ಹೆತ್ತ ತಂದೆ ತಾಯಿಯ ಡಬಲ್ ಮರ್ಡರ್. ಅಷ್ಟಕ್ಕೂ ಕೊಲೆ ಆಗಿದ್ದು ಎಲ್ಲಿ ಏಕೆ ಅಂತಿರಾ ಈ ಸ್ಟೋರಿ…

ಆಸ್ತಿ ವಿಚಾರವಾಗಿ ಮಗನೇ ಹೆತ್ತ ತಂದೆ-ತಾಯಿನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಘಟನೆ ಶನಿವಾರ ಸಂಜೆ ನಡೆದಿದೆ. ರಾಮಕೃಷ್ಣಪ್ಪ (70), ಮುನಿರಾಮಕ್ಕ (65) ಹೆತ್ತ ಮಗನಿಂದಲೇ ಕೊಲೆಗೀಡಾದ ವೃದ್ಧ ದಂಪತಿ. ಮಗ ನರಸಿಂಹಮೂರ್ತಿಯೇ ರಾಡ್ ನಿಂದ ಹೊಡೆದು ವೃದ್ಧ ದಂಪತಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬರುತ್ತಿದೆ. ಸದ್ಯ ಸೂಲಿಬೆಲೆ ಪೊಲೀಸರು ಮಗ ನರಸಿಂಹ ಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದಯವರಿಸಿದ್ದಾರೆ. ಮಗ ನರಸಿಂಹಮೂರ್ತಿ ಮದುವೆಯಾದಗಲಿಂದಲೂ ತಂದೆ ತಾಯಿ ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದ. ವೃದ್ಧ ದಂಪತಿಗೆ ಐದು ಮಂದಿ ಮಕ್ಕಳು ಅದರಲ್ಲಿ ನಾಲ್ಕು ಮಂದಿ ಹೆಣ್ಣು ಮಕ್ಕಳು, ಒಬ್ಬನೆ ಗಂಡು ಮಗ. ಐದು ಮಂದಿ ಮಕ್ಕಳಿಗೂ ಮದುವೆ ಮಾಡಿರುವ ವೃದ್ಧ ದಂಪತಿ. ಮಗ ತಂದೆ ತಾಯಿಯನ್ನ ಹೊರಗಿಟ್ಟಿದ್ದ ಎನ್ನಲಾಗಿದೆ. ದಂಪತಿ ಹೆಣ್ಣು ಮಕ್ಕಳಿಗೆ ಇರುವ ಆಸ್ತಿಯಲ್ಲಿ ಪಾಲು ಕೊಡಲು ಮುಂದಾಗಿದಕ್ಕೆ…

Read More