ಮತ್ತೆ ಖತರ್ನಾಕ್ ಇರಾನಿ ಗ್ಯಾಂಗ್ ಆಕ್ಟೀವ್: ಒಂಟಿ ಮಹಿಳೆ ವೃದ್ಧರೇ ಇವರ ಟಾರ್ಗೆಟ್.

ಆನೇಕಲ್ ನಲ್ಲಿ ಮಿತಿಮೀರಿದ ಇರಾನಿ ಗ್ಯಾಂಗ್ ಹಾವಳಿ: ಒಂದೇ ದಿನ 8 ಕಡೆ ಚೈನ್ ಸ್ನ್ಯಾಚಿಂಗ್ ಆನೇಕಲ್ ನಲ್ಲಿ ಇರಾನಿ ಗ್ಯಾಂಗ್ ಹಾವಳಿ ಮಿತಿಮೀರಿದ್ದು, ಸಿಕ್ಕ ಸಿಕ್ಕಲ್ಲಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಂದೇ ದಿನ 8 ಕಡೆ ಚೈನ್ ಸ್ನ್ಯಾಚಿಂಗ್ ನಡೆದಿದೆ. ಸರಣಿ ಸರಗಳ್ಳತನದಿಂದ ಆನೇಕಲ್ ಜನತೆ ಬೆಚ್ಚಿಬಿದ್ದಿದ್ದಾರೆ. ಬ್ಲ್ಯಾಕ್ ಅಂಡ್ ರೆಡ್ ಪಲ್ಸರ್ ಬೈಕ್ ಗಳಲ್ಲಿ ಬಂದು ಊರು ತುಂಬಾ ರೌಂಡ್ಸ್ ಹೊಡೆದು, ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರಗಳನ್ನ ಎಗರಿಸಿ ಪರಾರಿಯಾಗುತ್ತಿರುವ ಇರಾನಿ ಗ್ಯಾಂಗ್. ಆರೋಪಿಗಳ ವಿರುದ್ಧ ಜಿಗಣಿ, ಸೂರ್ಯನಗರ, ಅತ್ತಿಬೆಲೆ‌ ಮತ್ತು ತಮಿಳುನಾಡಿನ ಹೊಸೂರಿನಲ್ಲಿ ದೂರು ದಾಖಲಾಗಿದೆ.

Read More

ದೊಡ್ಡಬೆಳವಂಗಲ ಪೋಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಜಾತಿಗಳ ಕುಂದು ಕೊರತೆ ಸಭೆ…

ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಕುಂದುಕೊರತೆ ಸಭೆ ಇಂದು ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿತ್ತು. ಸಭೆಯಲ್ಲಿ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ಪಾಲ್ಗೊಂಡು ತಮ್ಮ ಸಮಸ್ಯೆಗಳು, ತಮಗಾಗಿರುವ ತೊಂದರೆಗಳು, ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡಿದರು. ಮುಖಂಡರ ಮನವಿ ಸ್ವೀಕರಿಸಿದ‌ ಪೋಲೀಸ್ ಆಧಿಕಾರಿಗಳು, ಬಾಕಿ ಉಳಿದರುವ ಪ್ರಕರಣಗಳನ್ನ ಕೂಡಲೇ ಇತ್ಯರ್ಥಪಡಿಸಿ ನ್ಯಾಯ ಒವಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದರು.

Read More