ಕುರುವಿಗೆರೆ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ….

Spread the love

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ
ಕುರುವಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಮುರಳಿಕುಮಾರ್ ಉಪಾಧ್ಯಕ್ಷರಾಗಿ ಅಶ್ವಥಪ್ಪ ಆಯ್ಕೆಯಾಗಿದ್ದಾರೆ,

ಇನ್ನು ಆಯ್ಕೆಯಾದ ಅಧ್ಯಕ್ಷ ಮುರಳಿ ಕುಮಾರ್ ಉಪಾಧ್ಯಕ್ಷ ಅಶ್ವಥಪ್ಪ
ನವರನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನರಸಿಂಹಯ್ಯ ಸನ್ಮಾನಿಸಿ
ಮಾತನಾಡಿ ಅಧ್ಯಕ್ಷರು ಎಲ್ಲಾ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಬೆಳೆಸಿ ಉನ್ನತ ಸ್ಥಾನಕ್ಕೆ ಏರಿಸಬೇಕೆಂದು ಹೇಳಿದರು,

ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಮುರುಳಿ ಕುಮಾರ್ ಮಾತನಾಡಿ, ರೈತರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ಮುಖ್ಯ ಕಸುಬಾಗಿಸಿಕೊಂಡು ಸುಗಮ ಜೀವನ ಸಾಗುತ್ತಿದ್ದಾರೆ, ಉತ್ತಮ ತಳಿಯ ರಾಸುಗಳಿಂದ ಗುಣಮಟ್ಟದ ಹಾಲು
ಪೋರೈಸಿದರೆ ಒಳ್ಳೆಯ ಲಾಂಭಾಂಶ ಪಡೆಯಲು ಸಾಧ್ಯವಾಗುತ್ತದೆ, ಸಂಘಗಳು ಉತ್ತಮ ರೀತಿಯಲ್ಲಿ ನಡೆಯಬೇಕಾದರೆ ಕಾರ್ಯಕಾರಿ ಮಂಡಳಿಗಳ
ಸಹಕಾರ ಅಗತ್ಯವಾಗಿರುತ್ತದೆ, ಇನ್ನೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ತಳಿಯ ರಾಸುಗಳನ್ನು ಕಟ್ಟಿಕೊಂಡು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು,

ಸಭೆಯಲ್ಲಿ ತೆಂಗು ನಾರಿನ ಅಧ್ಯಕ್ಷ ವೆಂಕಟೇಶ್ ಬಾಬು, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ, ನಿರ್ದೇಶಕ. ಶ್ರೀನಿವಾಸ್,ನರೇಸೆಗೌಡ,
ಮುನೇಗೌಡ, ಮುನಿಕೃಷ್ಣ,ಆನಂದರಾಜು,
ಅಂಬರೀಶ್,ವಿಶ್ವಾಸ್,ಸುನಂದಮ್ಮ,
ನಾಗಮಣಿ, ವಿಜಯ್ ಕುಮಾರ್, ಗ್ರಾ. ಪಂ ಸದಸ್ಯ ಮುನಿಆಂಜಿನಪ್ಪ ಹಾಗೂ ರೈತರು ಹಾಜರಿದ್ದರು,

Related posts

Leave a Comment