ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ: ತಾಲೂಕು ಅಧ್ಯಕ್ಷರಾಗಿ ರಾಜು ಬೆಳವಂಗಲ ಆಯ್ಕೆ….

ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ಜವಾಬ್ಧಾರಿ ಕಡ್ಡಾಯವಾಗಿ ಇರಲೇಬೇಕು- ನೂತನ ಅಧ್ಯಕ್ಷ ರಾಜು ಬೆಳವಂಗಲ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ವತಿಯಿಂದ ಆರ್ ಟಿ‌ ಐ ಕುರಿತು ತರಬೇರತಿ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವನ್ನ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ದೊಡ್ಡಹೆಜ್ಜಾಜಿ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ತಾಲೂಕು ಘಟಕವನ್ನ ಸಹ ಉದ್ಘಾಟನೆ ಮಾಡಿ, ರಾಜು ಬೆಳವಂಗಲ ಅವರನ್ನ ತಾಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ಜವಾಬ್ಧಾರಿ ಕಡ್ಡಾಯವಾಗಿ ಇರಲೇಬೇಕು. ಪ್ರಶ್ನೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಹೋಗಿ ತಮ್ಮ ಹಕ್ಕುಗಳನ್ನ ಕೇಳಿ ಪಡೆಯಂತಹ ಧೈರ್ಯ ನಮ್ಮಲ್ಲಿರಬೇಕು ಎಂದು ತಾಲೂಕು ಘಟಕದ ನೂತನ ಅಧ್ಯಕ್ಷ ರಾಜು ಬೆಳವಂಗಲ ಅವರು ಹೇಳಿದರು. ಯಾವುದೇ ಸಂದರ್ಭದಲ್ಲಿ…

Read More

ಬೈಕ್ ಮತ್ತು ಟ್ಯಾಂಕರ್ ನಡುವೆ ಅಪಘಾತ: ಕೂದಳೆಯಲ್ಲಿ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ…

ಬೈಕ್ ಹಾಗೂ ಪೆಟ್ರೋಲ್ ಟ್ಯಾಂಕರ್ ನಡುವೆ ಅಪಘಾತ: ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾದ ಬೈಕ್ ಸವಾರ ಬೈಕ್ ಹಾಗೂ ಪೆಟ್ರೋಲ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿರುವ ಘಟನೆ ನಗರದ ಟಿಬಿ ವೃತ್ತದಲ್ಲಿ ನಡೆದಿದೆ. ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪೆಟ್ರೋಲ್ ಟ್ಯಾಂಕರ್ ಚಕ್ರದ ಕೆಳಗೆ ಬೈಕ್ ಸಿಲುಕಿ ನುಜ್ಜುಗುಜ್ಜಾಗಿದೆ, ಸ್ಥಳಕ್ಕೆ ನಗರ ಠಾಣಾ ಪೊಲೀಸರು ಧಾವಿಸಿ ಸಂಚಾರ ದಟ್ಟಣೆ ನಿಯಂತ್ರಿಸಿ, ಪರಿಶೀಲನೆ‌ ನಡೆಸಿದರು. ಕೆಳಗಿನಜೂಗಾನಹಳ್ಳಿ ನಿವಾಸಿ ಹನುಮಂತರಾಯಪ್ಪ ಎಂಬುವವರಿಗೆ ಅಪಘಾತದಲ್ಲಿ ಗಾಯಗಳಾಗಿವೆ. ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಜೊತೆಯಲ್ಲಿ ಎಣ್ಣೆ ಹೊಡೆದು ಸ್ನೇಹಿತ ಕೊಲೆ: ಸಿಕ್ಕಿಬೀಳುವ ಭಯದಲ್ಲಿ ಮತ್ತೊಬ್ಬ ಆತ್ಮಹತ್ಯೆ.

ಇಬ್ಬರು ಪ್ರಾಣ ಸ್ನೇಹಿತರ ನಡುವೆ ಜಮೀನು ಗಲಾಟೆ: ಎಣ್ಣೆ ಕುಡಿಸಿ ಪ್ರಾಣ ಸ್ನೇಹಿತನ ಜೀವ ತೆಗೆದ ಗೆಳೆಯರು: ಮೃತದೇಹವನ್ನು ಗುಹೆಯಲ್ಲಿ ಸುಟ್ಟುಹಾಕಿ ಪರಾರಿ: ಒಬ್ಬ ಆರೋಪಿ ಪೊಲೀಸರ ತನಿಖೆಗೆ ಹೆದರಿ ಆತ್ಮಹತ್ಯೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಂಧ್ರಪ್ರದೇಶ ಮೂಲದ ತನ್ನ ಸ್ನೇಹಿತನನ್ನೇ ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ಗುಹೆಯಲ್ಲಿ ಸುಟ್ಟುಹಾಕಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವಂಡಮಾನ್ ಜಲಾಶಯದ ಬಳಿ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯೊಬ್ಬನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪಾತಪಾಳ್ಯ ಠಾಣಾ ಪೊಲೀಸರು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ. ಇನ್ನೊಬ್ಬ ಆರೋಪಿ ಪೊಲೀಸರ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಂಧ್ರಪ್ರದೇಶದ ದಾದಿವಾರಪಲ್ಲಿ ನಿವಾಸಿ ವೆಂಕಟರಮಣ ನಾಯ್ಕ ಎಂಬಾತ ಕಾಣೆಯಾಗಿದ್ದನು, ಈ ಬಗ್ಗೆ ವೆಂಕಟರಮಣನ ತಂದೆ ಜನವರಿ 7 ರಂದು ಸತ್ಯ ಸಾಯಿ ಜಿಲ್ಲಾ ಅಮ್ಮಡಗೂರು ಪೊಲೀಸ್ ಠಾಣೆಗೆ ನಾಪತ್ತೆ…

Read More

ಕುರುವಿಗೆರೆ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ….

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಕುರುವಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಮುರಳಿಕುಮಾರ್ ಉಪಾಧ್ಯಕ್ಷರಾಗಿ ಅಶ್ವಥಪ್ಪ ಆಯ್ಕೆಯಾಗಿದ್ದಾರೆ, ಇನ್ನು ಆಯ್ಕೆಯಾದ ಅಧ್ಯಕ್ಷ ಮುರಳಿ ಕುಮಾರ್ ಉಪಾಧ್ಯಕ್ಷ ಅಶ್ವಥಪ್ಪನವರನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನರಸಿಂಹಯ್ಯ ಸನ್ಮಾನಿಸಿಮಾತನಾಡಿ ಅಧ್ಯಕ್ಷರು ಎಲ್ಲಾ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಬೆಳೆಸಿ ಉನ್ನತ ಸ್ಥಾನಕ್ಕೆ ಏರಿಸಬೇಕೆಂದು ಹೇಳಿದರು, ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಮುರುಳಿ ಕುಮಾರ್ ಮಾತನಾಡಿ, ರೈತರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ಮುಖ್ಯ ಕಸುಬಾಗಿಸಿಕೊಂಡು ಸುಗಮ ಜೀವನ ಸಾಗುತ್ತಿದ್ದಾರೆ, ಉತ್ತಮ ತಳಿಯ ರಾಸುಗಳಿಂದ ಗುಣಮಟ್ಟದ ಹಾಲುಪೋರೈಸಿದರೆ ಒಳ್ಳೆಯ ಲಾಂಭಾಂಶ ಪಡೆಯಲು ಸಾಧ್ಯವಾಗುತ್ತದೆ, ಸಂಘಗಳು ಉತ್ತಮ ರೀತಿಯಲ್ಲಿ ನಡೆಯಬೇಕಾದರೆ ಕಾರ್ಯಕಾರಿ ಮಂಡಳಿಗಳಸಹಕಾರ ಅಗತ್ಯವಾಗಿರುತ್ತದೆ, ಇನ್ನೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ತಳಿಯ ರಾಸುಗಳನ್ನು ಕಟ್ಟಿಕೊಂಡು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು, ಸಭೆಯಲ್ಲಿ ತೆಂಗು ನಾರಿನ…

Read More

ದಕ್ಷಿಣ ಕಾಶಿ ಶಿವಗಂಗೆಯಲ್ಲಿ ತೀರ್ಥೋದ್ಭವ: ವಿಸ್ಮಯ ಕಣ್ತುಂಬಿಕೊಂಡ ಭಕ್ತಾಧಿಗಳು…

ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ತೀರ್ಥೋದ್ಭವ: ವಿಸ್ಮಯ‌ ಕಣ್ತುಂಬಿಕೊಂಡ ಭಕ್ತಗಣ ನೆಲಮಂಗಲ ತಾಲೂಕಿನಲ್ಲಿರುವ ದಕ್ಷಿಣ ಕಾಶಿಯಂದೇ‌ ಕರೆಯಲ್ಪಡುವ ಶಿವಗಂಗೆಯಲ್ಲಿ ಪ್ರತಿ ವರ್ಷದ ಮಕರ ಸಂಕ್ರಾತಿಯಂದು ತೀರ್ಥೋದ್ಭವವಾಗಿದೆ. ಬೆಟ್ಟದ ತುತ್ತತುದಿ ಸುಮಾರು 4,547 ಅಡಿ ಮೇಲೆ ಇಂದು ಬೆಳಿಗ್ಗೆ 8.25 ಗಂಟೆಗೆ ಗಂಗೋತ್ಪತ್ತಿಯಾಗಿದ್ದು, ಪ್ರಕೃತಿಕ ವಿಸ್ಮಯವನ್ನ ಭಕ್ತರು ಕಣ್ತುಂಬಿಕೊಂಡಿದ್ದಾರೆ. ಶಿವಗಂಗೆ ಕ್ಷೇತ್ರದಲ್ಲಿ ಪ್ರತಿವರ್ಷ ಮಕರ ಸಂಕ್ರಮಣದಂದು ನಡೆಯುವ ಗಂಗಾಧರೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ತೀರ್ಥೋದ್ಭವವಾದ ತೀರ್ಥ ತಂದು ಗಿರಿಜಾ ಕಲ್ಯಾಣವನ್ನು ನೆರವೇರಿಸಲಾಯಿತು. ಮಕರ ಸಂಕ್ರಾತಿಯಂದು ನಡೆಯುವ ಗಿರಿದಾ ಕಲ್ಯಾಣ ಮಹೋತ್ಸವ ನೋಡಲು ಶಿವಗಂಗಾ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಾರೆ, ಬಂದಂತಹ ಭಕ್ತಾದಿಗಳಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿದೆ. ಇಂದು ಶಿವಗಂಗೆ ಬೆಟ್ಟಕ್ಕೆ 50 ಸಾವಿರಕ್ಕೂ ಹೆಚ್ಚು ಜನರು ಬರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಬ್ಬರು ಡಿವೈಎಸ್ಪಿ, ನಾಲ್ವರು ಅರಕ್ಷಕ ನಿರೀಕ್ಷಕರು,…

Read More

ಹಳ್ಳಿ ಹಳ್ಳಿಯಲ್ಲೂ ರಾಮನಾಮ ಜಪ: ಭಜನೆ ಮಾಡಿ ರಾಮ ನಾಮ ಹೇಳಿದ ಗ್ರಾಮಸ್ಥರು….

ಜ.22ಕ್ಕೆ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ: ಪ್ರತಿ ಹಳ್ಳಿಯಲ್ಲೂ ರಾಮನ‌ ಜಪ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ಎಲ್ಲರ ಮನದಲ್ಲೂ ರಾಮನ ನಾಮ ಜಪವಾಗುತ್ತಿದೆ. ದೊಡ್ಡಬಳ್ಳಾಪುರದ ಮಧುರನಹೊಸಹಳ್ಳಿ ಗ್ರಾಮದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಇಂದು ಮುಂಜಾನೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ಶ್ರೀ ಮಾರುತಿ ಭಕ್ತ ಮಂಡಳಿ ವತಿಯಿಂದ ಊರೆಲ್ಲಾ ಭಜನೆ ರಾಮನ‌ನ್ನ ಜಪಿಸಲಾಯಿತು. ಗ್ರಾಮದಲ್ಲಿ ಭಜನಾ ಮೆರವಣಿಗೆ ಮೂಲಕ ದೇವರ ಆರಾಧನೆ ಮಾಡಲಾಯಿತು.

Read More

ದೊಡ್ಡಬೆಳವಂಗಲ ಪೋಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಜಾತಿಗಳ ಕುಂದು ಕೊರತೆ ಸಭೆ…

ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಕುಂದುಕೊರತೆ ಸಭೆ ಇಂದು ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿತ್ತು. ಸಭೆಯಲ್ಲಿ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ಪಾಲ್ಗೊಂಡು ತಮ್ಮ ಸಮಸ್ಯೆಗಳು, ತಮಗಾಗಿರುವ ತೊಂದರೆಗಳು, ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡಿದರು. ಮುಖಂಡರ ಮನವಿ ಸ್ವೀಕರಿಸಿದ‌ ಪೋಲೀಸ್ ಆಧಿಕಾರಿಗಳು, ಬಾಕಿ ಉಳಿದರುವ ಪ್ರಕರಣಗಳನ್ನ ಕೂಡಲೇ ಇತ್ಯರ್ಥಪಡಿಸಿ ನ್ಯಾಯ ಒವಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದರು.

Read More

ಕಾಲಿಗೆ ಗುಂಡೇಟು, ನಟೋರಿಯಸ್ ರೌಡಿ ಬಂಧನ…..

ಸುಳ್ಯದ ಕೆವಿಜಿ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆಯಲ್ಲಿ ಶರಣ್ ಪ್ರಮುಖ ಆರೋಪಿಯಾಗಿರುವ ನಟೋರಿಯಸ್ ರೌಡಿಶೀಟರ್ ಅಕಾಶ್ ಭವನ ಶರಣ್ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ನಗರದ ಜೆಪ್ಪು ಮಹಾಕಾಳಿ ಪಡ್ಪು ಬಳಿ ಶರಣ್ ಮೇಲೆ ಫೈರಿಂಗ್ ಮಾಡಲಾಗಿದ್ದು, ಮೊಣಕಾಲಿಗೆ ಗುಂಡು ತಗುಲಿರುವ ಕಾರಣ ಗಾಯಗೊಂಡ ಶರಣ್ ನನ್ನ ನಗರದ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶರಣ್ ವಿರುದ್ಧ ಮಂಗಳೂರು ಮತ್ತು ಉಡುಪಿಯಲ್ಲಿ ಕೊಲೆ ಹಾಗೂ ಕೊಲೆ ಯತ್ನ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಸುಲಿಗೆ ಸೇರಿದಂತೆ 41 ಪ್ರಕರಣಗಳು ದಾಖಲಾಗಿವೆ. 2020ರ ಆಗಸ್ಟ್‌ನಲ್ಲಿ ಸೆರೆವಾಸದಲ್ಲಿದ್ದಾಗ ಸುರೇಂದ್ರ ಬಂಟ್ವಾಳ ಹತ್ಯೆಯನ್ನು ತನ್ನ ಸಹಚರರ ಮೂಲಕ ಆಯೋಜಿಸಿದ್ದ. 2022 ರ ಕೊನೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ, ಸುರತ್ಕಲ್ ಬಳಿ ಸ್ಕೂಟರ್ ಸವಾರನನ್ನು ದರೋಡೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಜನವರಿ 14, 2023 ರಂದು ಮತ್ತೆ ಬಂಧಿಸಲಾಯಿತು. ನಾಲ್ಕು ತಿಂಗಳ ಜೈಲಿನಲ್ಲಿ…

Read More

ಕಾಲೇಜು ಮುಗಿಸಿ ಮನೆಗೆ ಬಂದ ವಿಧ್ಯಾರ್ಥಿನಿ‌ ನೇಣಿಗೆ ಶರಣು. ಡೆತ್ ನೋಟ್‌ ಬರೆದು ಸಾವು..

ಡೆತ್ ನೋಟ್ ಬರೆದು ನೇಣಿಗೆ ಶರಣಾದ ಯುವತಿ ಡೆತ್ ನೋಟ್ ಬರೆದು ಯುವತಿ ನೇಣಿಗೆ ಶರಣಾಗಿರುವ ಘಟನೆ ನಗರದ ತ್ಯಾಗರಾಜನಗರದ ಬಳಿ ಇಂದು ಸಂಜೆ ಸುಮಾರು 5:30ರ ಸಮಯದಲ್ಲಿ ನಡೆದಿದೆ. ನಾಗಭೂಷಣ್ ಹಾಗೂ ಈಶ್ವರಮ್ಮ ದಂಪತಿಯ ಒಬ್ಬಳೇ ಮಗಳಾದ ಝಾನ್ಸಿ(17), ನೇಣಿಗೆ ಶರಣಾಗಿರುವ ಯುವತಿ. ನಗರದ ಖಾಸಗಿ ಕಾಲೇಜಿನಲ್ಲಿ ಝಾನ್ಸಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇಂದು ಸಹ ಕಾಲೇಜು ಮುಗಿಸಿಕೊಂಡು ಬಂದು ಡೆತ್ ನೋಟ್ ಬರೆದು ಕಾಲೇಜಿನ ಸಮವಸ್ತ್ರದಲ್ಲೇ ನೇಣಿಗೆ ಶರಣಾಗಿದ್ದಾರೆ. ಸಾವಿನ ಬಗ್ಗೆ ಇನ್ನೂ ನಿಖರ ಮಾಹಿತಿ ತಿಳಿದುಬಂದಿಲ್ಲ. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣಾ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಡೆತ್ ನೋಟ್ ವಿವರ ನಾನು ಯಾರಿಗೂ ಮೋಸ ಮಾಡಿಲ್ಲ….ಮಿಸ್ ಯು ಆಲ್ ಫ್ರೆಂಡ್ಸ್….ಬುಜ್ಜಿ ಐ ಮಿಸ್ ಯು…ನಾನು…

Read More

ಮೇಕೆ ಮೇಲೆ ಚಿರತೆ ದಾಳಿ, ಮುಂದುವರಿದ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ…

ಮುಂದುವರಿದ ಚಿರತೆ ಹಾವಳಿ- ಚಿರತೆ ದಾಳಿಗೆ ಮೇಕೆ ಬಲಿ- ಆತಂಕದಲ್ಲಿ ಜನ- ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಆಗ್ರಹ ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಹೊಸಹಳ್ಳಿ ಸಮೀಪದ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ. ಮುನಿರಾಜು ಎಂಬುವವರಿಗೆ ಸೇರಿದ ಮನೆಯೊಂದರಲ್ಲಿ ಕಟ್ಟಿಹಾಕಲಾಗಿದ್ದ ಮೇಕೆಯನ್ನು ಊರ ಹೊರವಲಯಕ್ಕೆ ಹೊತ್ತೊಯ್ದ ಕತ್ತು ಸೀಳಿ ಅರೆಬರೆ ತಿಂದು ಪರಾರಿಯಾಗುರುವ ಘಟನೆ ತಡರಾತ್ರಿ ಸುಮಾರು 2‌ಗಂಟೆ ಸಮಯದಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಕುಕ್ಕಲಹಳ್ಳಿ ಗ್ರಾಮದಲ್ಲೂ ಸಹ ಇದೇ ರೀತಿ ಮನೆ ಕಾಂಪೌಡ್ ಒಳಗೆ ಇದ್ದ ಮೆಕೆಯನ್ನ ಹೊತ್ತೊಯ್ದು ಬಲಿ ಪಡೆದಿತ್ತು, ಇದೀಗ ಈ‌ ಘಟನೆ ಮಾಸುವ ಮೊದಲೇ ಇನ್ನೊಂದು ಮೇಕೆ‌ ಮೇಲೆ ದಾಳಿ ಮಾಡಲಾಗಿದೆ. ಚಿರತೆ ಹಾವಳಿಯಿಂದ ತಾಲೂಕಿನ ಜನತೆ ಭಯಭೀತರಾಗಿದ್ದು, ಕೂಡಲೇ ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯಲ್ಲಿ ಸಾರ್ವಜನಿಕರು ಕೋರಿದ್ದಾರೆ.

Read More