ಕಾಲಿಗೆ ಗುಂಡೇಟು, ನಟೋರಿಯಸ್ ರೌಡಿ ಬಂಧನ…..

Spread the love

ಸುಳ್ಯದ ಕೆವಿಜಿ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆಯಲ್ಲಿ ಶರಣ್ ಪ್ರಮುಖ ಆರೋಪಿಯಾಗಿರುವ ನಟೋರಿಯಸ್ ರೌಡಿಶೀಟರ್ ಅಕಾಶ್ ಭವನ ಶರಣ್ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ನಗರದ ಜೆಪ್ಪು ಮಹಾಕಾಳಿ ಪಡ್ಪು ಬಳಿ ಶರಣ್ ಮೇಲೆ ಫೈರಿಂಗ್ ಮಾಡಲಾಗಿದ್ದು, ಮೊಣಕಾಲಿಗೆ ಗುಂಡು ತಗುಲಿರುವ ಕಾರಣ ಗಾಯಗೊಂಡ ಶರಣ್ ನನ್ನ ನಗರದ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶರಣ್ ವಿರುದ್ಧ ಮಂಗಳೂರು ಮತ್ತು ಉಡುಪಿಯಲ್ಲಿ ಕೊಲೆ ಹಾಗೂ ಕೊಲೆ ಯತ್ನ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಸುಲಿಗೆ ಸೇರಿದಂತೆ 41 ಪ್ರಕರಣಗಳು ದಾಖಲಾಗಿವೆ.

2020ರ ಆಗಸ್ಟ್‌ನಲ್ಲಿ ಸೆರೆವಾಸದಲ್ಲಿದ್ದಾಗ ಸುರೇಂದ್ರ ಬಂಟ್ವಾಳ ಹತ್ಯೆಯನ್ನು ತನ್ನ ಸಹಚರರ ಮೂಲಕ ಆಯೋಜಿಸಿದ್ದ. 2022 ರ ಕೊನೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ, ಸುರತ್ಕಲ್ ಬಳಿ ಸ್ಕೂಟರ್ ಸವಾರನನ್ನು ದರೋಡೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಜನವರಿ 14, 2023 ರಂದು ಮತ್ತೆ ಬಂಧಿಸಲಾಯಿತು.

ನಾಲ್ಕು ತಿಂಗಳ ಜೈಲಿನಲ್ಲಿ ಕಳೆದ ನಂತರ, ಅವರು ಬಿಡುಗಡೆಯಾದರು ಮತ್ತು ತಕ್ಷಣವೇ ಭೂಗತರಾದರು. ಹೆಚ್ಚುವರಿಯಾಗಿ, ಈ ಕುಖ್ಯಾತ ಕ್ರಿಮಿನಲ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ದಾಖಲಾಗಿದೆ.

ನಟೋರಿಯಸ್ ರೌಡಿಶೀಟರ್ ಅಕಾಶ್ ಭವನ ಶರಣ್ ಮೇಲೆ ಪೊಲೀಸರಿಂದ ಫೈರಿಂಗ್ ಹಿನ್ನೆಲೆ, ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿಳಿ ಬಣ್ಣದ ಐ10 ಕಾರಿನಲ್ಲಿ ಉಡುಪಿಯ ಮಲ್ಪೆಯಿಂದ ತಪ್ಪಿಸಿಕೊಂಡು ಶರಣ್ ಬಂದಿದ್ದ, ಮಲ್ಪೆಯಲ್ಲಿ ಸ್ನೇಹಿತನ ರೂಂನಲ್ಲಿ ಅಡಗಿರುವ ಬಗ್ಗೆ ಸಿಸಿಬಿ ಟೀಂ ಮಾಹಿತಿ ಪಡೆದು ಬಂಧಿಸಲು ತೆರಳಿದ್ದಾಗ ಕೆಲವೇ ಕ್ಷಣಗಳ ಮೊದಲು ಶರಣ್ ಎಸ್ಕೇಪ್ ಆಗಿದ್ದ. ಆಶ್ರಯ ಕೊಟ್ಟ ಸ್ನೇಹಿತನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಐ10 ಕಾರಿನಲ್ಲಿ ತೆರಳಿದ್ದ ಬಗ್ಗೆ ಮಾಹಿತಿ ಆಶ್ರಯಕೊಟ್ಟ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದ. ಹೆಜಮಾಡಿ ಟೋಲ್ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ಶರಣ್ ನನ್ನ ಚೇಸಿಂಗ್ ಮಾಡಿ ಪಂಪ್ ವೆಲ್ ಬಳಿ ಪೊಲೀಸರ ಕಣ್ಣಿಗೆ ಬಿದ್ದು ಒಂಟಿಯಾಗಿ ಕಾರು ಓಡಿಸಿಕೊಂಡು ಹೋಗಿ ಜೆಪ್ಪು ಕುಡುಪಾಡಿ ರಸ್ತೆಯ ಖಾಸಗಿ ಜಾಗದಲ್ಲಿ ಕಾರು ನಿಲ್ಲಿಸಿದ್ದ, ಈ ವೇಳೆ ಖಾಸಗಿ ಕಾರಿನಲ್ಲಿ ಬಂದ 8 ಮಂದಿ ಸಿಸಿಬಿ ಪೊಲೀಸರು ಶರಣ್ ಕಾರನ್ನ ಸುತ್ತುವರಿದಾಗ ಕಾನ್ಸ್‌ಟೇಬಲ್ ಪ್ರಕಾಶ್ ಮೇಲೆ ಚೂರಿಯಿಂದ ಶರಣ್ ದಾಳಿ ಮಾಡಲು ಯತ್ನಿಸಿದಾಗ ಶರಣ್ ಕಾಲಿಗೆ ಪಿಎಸ್ ಐ ಸುದೀಪ್ ಅವರು ಫೈರ್ ಮಾಡಿದ್ದಾರೆ.

Related posts

Leave a Comment