ಪೋಲೀಸರ ಅತಿಥಿಗಳಾದ ಅಕ್ರಮ ಚಿನ್ನ ಸಾಗಣೆಗಾರರು…

Spread the love

ಚಿನ್ನದ ಪೇಸ್ಟ್ ಹಾಗೂ ಪುಡಿಯನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

47.89 ಲಕ್ಷ ಮೌಲ್ಯದ 777.5 ಗ್ರಾಂ ಚಿನ್ನದ ಪೇಸ್ಟ್ ನ್ನು ಮೊಣಕಾಲಿನ ಕ್ಯಾಪ್ ನಲ್ಲಿ ಮೆರೆಮಾಚಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಏರ್ ಪ್ರಯಾಣಿಕನನ್ನ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ.

ಸಿಂಗಾಪುರ್ ಏರ್ಲೈನ್ಸ್ SQ510 ಮೂಲಕ KIAL ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನನ್ನ ತಪಾಸಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ವಿಚಾರಣೆ ಮುಂದುವರಿಸಲಾಗಿದೆ.

ಅದೇರೀತಿ ಜ.28ರಂದು ಜೆಡ್ಡಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನ ತಪಾಸಣೆಗೆ ಒಳಪಡಿಸಿದಾಗ 7,52,875 ಮೌಲ್ಯದ 122.22 ಗ್ರಾಂ ಚಿನ್ನದ ಪುಡಿಯನ್ನು ಮೇಣದೊಂದಿಗೆ ಬೆರೆಸಿ ನೀರಿನ ಫ್ಲಾಸ್ಕ್ ನ ಸುತ್ತು ಅಂಟಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಲಾಗಿದೆ.

ಕೂಡಲೇ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನ ವಶಕ್ಕೆ ಪಡೆದು ಚಿನ್ನದ ಪುಡಿಯನ್ನ ಜಪ್ತಿ ಮಾಡಲಾಗಿದೆ.

Related posts

Leave a Comment