ಗೋ ಮೂತ್ರ ಗುಂಡಿಯಲ್ಲಿ ಬಿದ್ದು ತಂದೆ ಮಗ ಧಾರುಣ ಸಾವು….

Spread the love

ಗೋಮೂತ್ರ ತುಂಬಿದ ಗುಂಡಿಯಲ್ಲಿ ಬಿದ್ದು ತಂದೆ- ಮಗ ದಾರುಣ ಸಾವು

ಗೋಮೂತ್ರ ತುಂಬಿದ ಗುಂಡಿಯಲ್ಲಿ ಬಿದ್ದು ತಂದೆ- ಮಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಗೌಡನಗಳ್ಳಿ ಗ್ರಾಮದಲ್ಲಿರುವ ಜಮೀನೊಂದರಲ್ಲಿ ನಡೆದಿದೆ.

ಗ್ರಾಮದ ಮಹಾಲಿಂಗಪ್ಪ (50), ಪುತ್ರ ಪೃಥ್ವಿ (25) ಮೃತ ದುರ್ದೈವಿಗಳು.

ಅಡಿಕೆ ಗಿಡಗಳಿಗೆ ಗೋಮೂತ್ರ ಹಾಕಲು ಜಮೀನಲ್ಲಿ ಗುಂಡಿಯನ್ನ ತೆಗಿಸಲಾಗಿತ್ತು. ಐದಕ್ಕೂ ಹೆಚ್ಚು ಅಡಿ ಆಳದ ಆ ಗುಂಡಿಯಲ್ಲಿ ಗೋಮೂತ್ರ ಶೇಖರಣೆಯಾಗಿತ್ತು. ಅಡಿಕೆ ಗಿಡಗಳಿಗೆ ಗುಂಡಿಯಿಂದ ಗೋಮೂತ್ರ ತುಂಬಿ ಹಾಕುವಾಗ ಮಹಾಲಿಂಗಪ್ಪ ಕಾಲು ಜಾರಿ ಬಿದ್ದಿದ್ದಾರೆ. ಗುಂಡಿಗೆ ಬಿದ್ದ ತನ್ನ ತಂದೆಯನ್ನ ರಕ್ಷಣೆಗೆ ಇಳಿದಿದ್ದ ಪುತ್ರನೂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಹಿರಿಯೂ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Comment