ಅಡುಗೆ ಅನಿಲ ಇ ಕೆವೈಸಿ ಅನಗತ್ಯ: ಜಿಲ್ಲಾಡಳಿತ ಸ್ಪಷ್ಟನೆ..

Spread the love

ಅಡುಗೆ ಅನಿಲ ಸಂಪರ್ಕ:ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕ ನಿಗದಿ ಪಡಿಸಿಲ್ಲ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 02(ಕರ್ನಾಟಕ ವಾರ್ತೆ):-ಅಡುಗೆ ಅನಿಲ ಸಂಪರ್ಕ(ಎಲ್.ಪಿ.ಜಿ ಗ್ಯಾಸ್) ಸಂಪರ್ಕ ಹೊಂದಿರುವ ಫಲಾನುಭವಿಗಳು ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರ ಕೊನೆ ದಿನಾಂಕವನ್ನು ನಿಗದಿಪಡಿಸಿಲ್ಲ ಮತ್ತು ಸಾರ್ವಜನಿಕರು ಬಿಡುವಿನ ವೇಳೆಯಲ್ಲಿ ಇ-ಕೆವೈಸಿ ಮಾಡಿಸಬಹುದಾಗಿರುತ್ತದೆ. ಇ.ಕೆವೈಸಿ ಪ್ರಕ್ರಿಯೆಯು ಉಚಿತವಾಗಿರುತ್ತದೆ. ಆದ್ದರಿಂದ 31.12.2023 ರ ಒಳಗಾಗಿ ಗ್ಯಾಸ್ ಎಜೆನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಬೇಕು ಎನ್ನುವ ವದಂತಿಗೆ ಕಿವಿಗೊಡಬಾರದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Comment