ಅಡುಗೆ ಅನಿಲ ಇ ಕೆವೈಸಿ ಅನಗತ್ಯ: ಜಿಲ್ಲಾಡಳಿತ ಸ್ಪಷ್ಟನೆ..

ಅಡುಗೆ ಅನಿಲ ಸಂಪರ್ಕ:ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕ ನಿಗದಿ ಪಡಿಸಿಲ್ಲಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 02(ಕರ್ನಾಟಕ ವಾರ್ತೆ):-ಅಡುಗೆ ಅನಿಲ ಸಂಪರ್ಕ(ಎಲ್.ಪಿ.ಜಿ ಗ್ಯಾಸ್) ಸಂಪರ್ಕ ಹೊಂದಿರುವ ಫಲಾನುಭವಿಗಳು ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರ ಕೊನೆ ದಿನಾಂಕವನ್ನು ನಿಗದಿಪಡಿಸಿಲ್ಲ ಮತ್ತು ಸಾರ್ವಜನಿಕರು ಬಿಡುವಿನ ವೇಳೆಯಲ್ಲಿ ಇ-ಕೆವೈಸಿ ಮಾಡಿಸಬಹುದಾಗಿರುತ್ತದೆ. ಇ.ಕೆವೈಸಿ ಪ್ರಕ್ರಿಯೆಯು ಉಚಿತವಾಗಿರುತ್ತದೆ. ಆದ್ದರಿಂದ 31.12.2023 ರ ಒಳಗಾಗಿ ಗ್ಯಾಸ್ ಎಜೆನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಬೇಕು ಎನ್ನುವ ವದಂತಿಗೆ ಕಿವಿಗೊಡಬಾರದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಆಂಬ್ಯುಲೆನ್ಸ್ ನಲ್ಲೇ‌ಹೆಣ್ಣು ಮಗುವಿಗೆ ಜನ್ಮ…

108 ಆಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ..! 108 ಆಂಬುಲೆನ್ಸ್ ನಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಳಿ ನಡೆದಿದೆ. ಗರ್ಭಿಣಿಯನ್ನು ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದಿಂದ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ಮಾರ್ಗಮಧ್ಯೆಯೇ ಹೆರಿಗೆ ಆಗಿದೆ. 108 ಸಿಬ್ಬಂದಿಯು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಹಾಗೂ ಹೆಣ್ಣು ಮಗು ಇಬ್ಬರ ಆರೋಗ್ಯ ಕ್ಷೇಮವಾಗಿದೆ ಎಂದು ತಿಳಿದುಬಂದಿದೆ.

Read More