ಮತ್ತೆ ಖತರ್ನಾಕ್ ಇರಾನಿ ಗ್ಯಾಂಗ್ ಆಕ್ಟೀವ್: ಒಂಟಿ ಮಹಿಳೆ ವೃದ್ಧರೇ ಇವರ ಟಾರ್ಗೆಟ್.

Spread the love

ಆನೇಕಲ್ ನಲ್ಲಿ ಮಿತಿಮೀರಿದ ಇರಾನಿ ಗ್ಯಾಂಗ್ ಹಾವಳಿ: ಒಂದೇ ದಿನ 8 ಕಡೆ ಚೈನ್ ಸ್ನ್ಯಾಚಿಂಗ್

ಆನೇಕಲ್ ನಲ್ಲಿ ಇರಾನಿ ಗ್ಯಾಂಗ್ ಹಾವಳಿ ಮಿತಿಮೀರಿದ್ದು, ಸಿಕ್ಕ ಸಿಕ್ಕಲ್ಲಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಂದೇ ದಿನ 8 ಕಡೆ ಚೈನ್ ಸ್ನ್ಯಾಚಿಂಗ್ ನಡೆದಿದೆ. ಸರಣಿ ಸರಗಳ್ಳತನದಿಂದ ಆನೇಕಲ್ ಜನತೆ ಬೆಚ್ಚಿಬಿದ್ದಿದ್ದಾರೆ.

ಬ್ಲ್ಯಾಕ್ ಅಂಡ್ ರೆಡ್ ಪಲ್ಸರ್ ಬೈಕ್ ಗಳಲ್ಲಿ ಬಂದು ಊರು ತುಂಬಾ ರೌಂಡ್ಸ್ ಹೊಡೆದು, ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರಗಳನ್ನ ಎಗರಿಸಿ ಪರಾರಿಯಾಗುತ್ತಿರುವ ಇರಾನಿ ಗ್ಯಾಂಗ್.

ಆರೋಪಿಗಳ ವಿರುದ್ಧ ಜಿಗಣಿ, ಸೂರ್ಯನಗರ, ಅತ್ತಿಬೆಲೆ‌ ಮತ್ತು ತಮಿಳುನಾಡಿನ ಹೊಸೂರಿನಲ್ಲಿ ದೂರು ದಾಖಲಾಗಿದೆ.

Related posts

Leave a Comment