ಹಿಟ್ ಅಂಡ್ ರನ್ ಗೆ ಪತ್ರಕರ್ತನ ಕಾಲು ಮುರಿತ.. ಮಾನವೀಯತೆ ಮರೆತ ಕಾರು ಚಾಲಕ..

Spread the love

ಬೈಕ್ ಗೆ ಡಿಕ್ಕಿ ಹೊಡೆದು ಸ್ಥಳದಿಂದ ಕಾಲ್ಕಿತ್ತ ಕಾರು: ಬೈಕ್ ಸವಾರನಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

ಹಿಂಬದಿಯಿಂದ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿರುವ ಘಟನೆ ತಾಲೂಕಿನ‌ ಕಾಡನೂರು ಕೈಮರ ಸಮೀಪ ನಡೆದಿದೆ.

ಡಿಕ್ಕಿ ರಭಸಕ್ಕೆ ಬೈಕ್‌ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಪ್ರತಿಷ್ಠಿತ ಪತ್ರಿಕೆಯ ವಿತರಕ ಹಾಗೂ ಪತ್ರಿಕಾ ವರದಿಗಾರನಾಗಿದ್ದ ಚೇತನ್ (35)ಎಂಬ ವ್ಯಕ್ತಿಗೆ ಅಪಘಾತದಲ್ಲಿ ಕಾಲುಗಳಿಗೆ ತೀವ್ರ ಪೆಟ್ಟಾಗಿದೆ.

ಕಾರಿನ ಚಾಲಕ ಕನಿಷ್ಠ ಮಾನವೀಯ ಪ್ರಜ್ಞೆ ತೋರದೆ ಡಿಕ್ಕಿ ಹೊಡೆದು ಸ್ಥಳದಿಂದ ಕಾರು ಸಮೇತ ಕಾಲ್ಕಿತ್ತಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಗಾಯಾಳು ಕಾಲು ಮುರಿತಕ್ಕೆ ಒಳಗಾಗಿದ್ದು, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೊಡ್ಡಬೆಳವಂಗಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Related posts

Leave a Comment