ಬಾರ್ ನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ….

Spread the love

ನಿನ್ನೆ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ- ಇಂದು ಮಟ ಮಟ ಮಧ್ಯಾಹ್ನ ಕೊಲೆಯಲ್ಲಿ ಅಂತ್ಯ

ಚಿಂತಾಮಣಿ: ಹಣಕಾಸಿನ ವಿಚಾರಕ್ಕೆ ಬಾರ್ ಕ್ಯಾಶಿಯರ್ ಹಾಗೂ ಮತ್ತೊಂದು ವ್ಯಕ್ತಿ ನಡುವೆ ಆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಂದು ಮಧ್ಯಾಹ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ತಾಲೂಕಿನ ಚಿಲಕಲನೇರ್ಪು ಹೋಬಳಿ ಬುಡುಗುಂಟೆ ಗ್ರಾಮದ ಚಲಪತಿ ರವರ ಪುತ್ರ ಹೇಮಂತ್ ಕುಮಾರ್ (25), ಗುರುವಾರ ರಾತ್ರಿ ಹಣಕಾಸಿನ ವಿಚಾರಕ್ಕೆ ಆರ್.ಆರ್ ಬಾರ್ ಕ್ಯಾಶಿಯರ್ ನಡುವೆ ಗಲಾಟೆಯಾಗಿದೆ.

ಪುನಃ ಮತ್ತೆ ಇಂದು(ಶುಕ್ರವಾರ) ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿ ಆರ್ ಆರ್ ಬಾರ್ ಸಮೀಪವಿರುವ ಹೆಚ್‌.ಪಿ ಪೆಟ್ರೋಲ್ ಬಂಕ್ ನ ಕೊಠಡಿ ಒಂದರಲ್ಲಿ ಹೇಮಂತ್ ಕುಮಾರ್ ನನ್ನು ಬರ್ಬರಯಾಗಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕೊಲೆಯಾದ ಹೇಮಂತ್ ಒಂದು ವರ್ಷಗಳ ಹಿಂದೆ ಇದೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ಇನ್ನು ಘಟನಾ ಸ್ಥಳಕ್ಕೆ ನಗರ ಠಾಣೆಯ ಆರಕ್ಷಕ ನಿರೀಕ್ಷಕರಾದ ರಂಗಶಾಮಯ್ಯ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ‌ ನಡೆಸಿದ್ದಾರೆ.

Related posts

Leave a Comment