ಹಿಟ್ ಅಂಡ್ ರನ್ ಗೆ ವ್ಯಕ್ತಿ ಬಲಿ…

ಹಿಟ್ ಅಂಡ್ ರನ್ ಗೆ ಸ್ಥಳದಲ್ಲೇ ವ್ಯಕ್ತಿ ಬಲಿ: ಕಾರಿನ ಚಾಲಕ ಪರಾರಿ ಹಿಟ್ ಅಂಡ್ ರನ್ ಗೆ ಸ್ಥಳದಲ್ಲೇ ವ್ಯಕ್ತಿ ಬಲಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಮಗೊಂಡ್ಲು ಹೋಬಳಿಯ ಮದ್ದೇನಹಳ್ಳಿ ನಿವಾಸಿ ಸಿದ್ದಗಂಗಯ್ಯ (55) ಮೃತ ದುರ್ದೈವಿ. ಹಿಂಬದಿಯಿಂದ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ರಭಸವಾಗಿ ಡಿಕ್ಕಿ ಕಾರು ನಿಲ್ಲಸದೆ ಸ್ಥಳದಿಂದ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಗುದ್ದಿದ ಮೇಲೆ 20 ಅಡಿ ದ್ವಿಚಕ್ರ ವಾಹನವನ್ನು ಎಳೆದೊಯ್ದ ವ್ಯಕ್ತಿಗೆ ಇನ್ನಷ್ಟು ಗಾಯಗೊಳಿಸಲಾಗಿದೆ. ಸದ್ಯ ಶವವನ್ನು ನೆಲಮಂಗಲ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ತ್ಯಾಮಗೊಂಡ್ಲು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Read More