ಹೆತ್ತ ಮಗಳನ್ನೇ ಕೊಂದ ತಂದೆ… ಏಕೆ ಅಂತಿರಾ ಈ ಸ್ಟೋರಿ ನೋಡಿ……

ಮಗಳ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಕೊಂದ ಪಾಲಕರು ತಂಗಲ್ಲಪಲ್ಲಿ ಮಂಡಲದ ನೇರೆಲ್ಲ ಗ್ರಾಮದ ರಾಜಣ್ಣ ಸಿರಿಸಿಲ್ಲ – ಚೇಪ್ಯಾಲ ನರಸಯ್ಯ ಯೆಲ್ಲವ್ವರ ಹಿರಿಯ ಮಗಳು ಪ್ರಿಯಾಂಕ (25) ಕಳೆದ ಏಳು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಹಲವು ಆಸ್ಪತ್ರೆ, ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿದ್ದರು. ಆದರೆ ಮಾನಸ್ಥಿತಿ ಸರಿಹೋಗಿರಲಿಲ್ಲ. 2020ರಲ್ಲಿ ಪ್ರಿಯಾಂಕಾ ವಿವಾಹವಾಗಿದ್ದು, ರೋಗವು ಭಾಗಶಃ ವಾಸಿಯಾದ ನಂತರ 13 ತಿಂಗಳ ಮಗನನ್ನು ಹೊಂದಿದ್ದಾಳೆ. ಆದರೆ, ಪ್ರಿಯಾಂಕಾಳ ಮಾನಸಿಕ ಸ್ಥಿತಿ ಕಳೆದ ಒಂದು ತಿಂಗಳಿಂದ ತೀರ ಹದೆಗೆಟ್ಟಿತ್ತು, ಎಲ್ಲರಿಗೂ ತೊಂದರೆ ನೀಡುತ್ತಿದ್ದು, ಸುತ್ತಮುತ್ತಲಿನವರನ್ನು ನಿಂದಿಸಿ ಜಗಳವಾಡುತ್ತಿದ್ದಳು ಎಂದು ಪತಿ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಆಕೆಯನ್ನು ಬುಗ್ಗರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು ಮೂರು ದಿನಗಳ ಕಾಲ ಕೂಡಿ ಹಾಕಿದ್ದು, ಆಕೆ ಗುಣವಾಗದ ಹಿನ್ನೆಲೆಯಲ್ಲಿ ಬೇಸತ್ತ ಪೋಷಕರು ಆ.14ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಆಕೆಯನ್ನು ಕುತ್ತಿಗೆಗೆ ದಾರ ಬಿಗಿದು…

Read More

ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ: ಅಪಾರ ಮೌಲ್ಯದ ಚಿನ್ನ ಜಪ್ತಿ

1) 12,55,655 ಮೌಲ್ಯದ 197.43 ಗ್ರಾಂ ತೂಕದ ಚಿನ್ನದ ಕಾಡಾ ಮತ್ತು ಒ-ಲಿಂಕ್‌ಗಳನ್ನು ಬಟ್ಟೆಯೊಳಗೆ ಬಚ್ಚಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಒಬ್ಬ ಭಾರತೀಯ ಪ್ರಯಾಣಿಕನನ್ನು ಬಂಧಿಸಲಾಗಿದೆ. ಮಾ.18ರಂದು ಕೌಲಾಲಂಪುರದಿಂದ AK-053 ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಒಬ್ಬ ಭಾರತೀಯ ಪ್ರಯಾಣಿಕನನ್ನು ಏರ್ ಇಂಟೆಲಿಜೆನ್ಸ್ ಯುನಿಟ್ (AIU) ನ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 2) ಮಾ.18ರಂದು ಕುವೈಟ್‌ನಿಂದ J9-431 ಫ್ಲೈಟ್‌ನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಒಬ್ಬ ಭಾರತೀಯ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ 12,51,203 ಮೌಲ್ಯದ 196.73 ಗ್ರಾಂ ತೂಕದ ಚಿನ್ನದ ಕಟ್ ಚೈನ್‌ಗಳು, ಬಳೆಗಳು ಮತ್ತು ಪೆಂಡೆಂಟ್‌ಗಳನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 3) ವಿದೇಶಿ ಮೂಲದ ಚಿನ್ನವನ್ನು ಕಚ್ಚಾ ರೂಪದಲ್ಲಿ ರಹಸ್ಯವಾಗಿ ಸಾಗಿಸಲು ಪ್ರಯತ್ನಿಸಿದ ಇಬ್ಬರೂ ಪ್ರಯಾಣಿಕರಿಂದ ಒಟ್ಟು 1167.55 ಗ್ರಾಂ…

Read More

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಪೋಲೀಸ್ ಪೇದೆ…

4 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ ದೂರುದಾರರ ಬಂಧಿತ ವಾಹನವನ್ನು ಹಸ್ತಾಂತರಿಸಲು ‌4ಸಾವಿರ ರೂ. ಲಂಚ ಪಡೆದಿದ್ದಕ್ಕಾಗಿ ಪೊಲೀಸ್ ಪೇದೆಯನ್ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ತೆಲಂಗಾಣದ ಮೇದಕ್ ಜಿಲ್ಲೆಯ ಮೇದಕ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿರುವ ಬಿ.ಸುರೇಂದರ್ ಬಂಧಿತ ಆರೋಪಿ.

Read More

ಮಗ ರೈಲಿಗೆ ಸಿಲುಕಿ ಸಾವು, ರಕ್ಷಣೆ ಮಾಡಲು ಹೋಗಿ ಮಗನಿಲ್ಲದೆ ನಾನೇಕೆ ಎಂದು ತಾಯಿಯೂ ರೈಲಿಗೆ ಸಿಲುಕಿ ಸಾವು….

ಮಗನು ಸೂಸೈಡ್ ಮಾಡಿಕೊಂಡನೆಂದು ತಾಯಿಯೂ ಕೂಡ ಅತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ರೈಲ್ವೆ ಹಳಿಗೆ ಬಿದ್ದು ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ ತೇಲಿ (26),‌ ಸಾವಕ್ಕ ತೇಲಿ (40) ಆತ್ಮಹತ್ಯೆಗೆ ಶರಣಾದ ತಾಯಿ ಮಗ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಕೌಟುಂಬಿಕ ಸಮಸ್ಯೆಯಿಂದ ಮಂಜುನಾಥ್ ತೀವ್ರವಾಗಿ ಮನನೊಂದಿದ್ದ. ಈ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಗೆ ಬಂದಿದ್ದ. ಇದನ್ನು ತಡಿಯಲು ತಾಯಿ ಸಾವಕ್ಕ ತೇಲಿ ಯತ್ನಿಸಿದ್ದಾರೆ. ಆದರೆ ತಾಯಿಯ ಯತ್ನ ವಿಫಲವಾಗಿದೆ. ಮಗ ಸತ್ತನೆಂದು ತಾಯಿ ಸಾವಕ್ಕಳು ಸಹ ಹಳಿಗೆ ಬಿದ್ದು ದುರ್ಮರಣ ಹೊಂದಿದ್ದಾರೆ. ತಾಯಿ-ಮಗನ ಮೃತದೇಹ ಛಿದ್ರ ಛಿದ್ರವಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಲವಿಗಿ ರೈಲ್ವೆ ಪೊಲೀಸ್ ಠಾಣಾ…

Read More

ಪ್ರೀತ್ಸೆ ಪ್ರೀತ್ಸೆ ಅಂತ ಪ್ರಾಣ ತಿಂತಿದ್ದ ಪಾಗಲ್ ಪ್ರೇಮಿ, ಕೊನೆಗೆ ಪ್ರಾಣವನ್ನೇ ತೆಗೆದುಬಿಟ್ಟ. ಎಲ್ಲಿ ಅಂತಿರಾ ಈ ಸ್ಟೋರಿ ನೋಡಿ…….

ನಾಪತ್ತೆಯಾಗಿದ್ದ ಶಾಲಾ ವಿದ್ಯಾರ್ಥಿನಿ ಮರ್ಡರ್: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬಾಲಕಿ ಬಲಿ: ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ 2 ದಿನಗಳ ಹಿಂದೆ ಕಾಣೆಯಾಗಿದ್ದ 15 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಮ್ಮಲೂರು ಗ್ರಾಮದ ನಿವಾಸಿನಂದಿತ (15), ಮೃತ ಬಾಲಕಿ. ಬರಗೂರು ಗ್ರಾಮದ ನಿವಾಸಿ ನಿತಿನ್ (23), ಎಂಬ ಯುವಕ ಬಾಲಕಿಯನ್ನ ಅಪಹರಿಸಿ ಕೊಲೈಗೈದಿರುವ ಶಂಕೆ ವ್ಯಕ್ತವಾಗಿದೆ. ಕಳೆದ 15 ದಿನಗಳಿಂದ ಆರೋಪಿ ನಿತಿನ್ ಪ್ರೀತಿಸು ಎಂದು ಬಾಲಕಿ ಹಿಂದೆ ಬಿದ್ದು, ಪೀಡಿಸುತ್ತಿದ್ದ ಎನ್ನಲಾಗಿದೆ. ಪ್ರೀತಿ ನಿರಾಕರಣೆ ಹಿನ್ನೆಲೆ ಬಾಲಕಿಗೆ ಚಾಕುವಿನಿಂದ ತಿವಿದು ಕೊಲೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಕೊಲೆ ನಂತರ ಆರೋಪಿ ನಿತಿನ್ ಆತ್ಮಹತ್ಯೆ ಹೈಡ್ರಾಮ ಮಾಡಿದ್ದಾನೆ.‌ ಸದ್ಯ ಕೋಲಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.…

Read More

ಹಿಟ್ ಅಂಡ್ ರನ್ ಗೆ ವ್ಯಕ್ತಿ ಬಲಿ…

ಹಿಟ್ ಅಂಡ್ ರನ್ ಗೆ ಸ್ಥಳದಲ್ಲೇ ವ್ಯಕ್ತಿ ಬಲಿ: ಕಾರಿನ ಚಾಲಕ ಪರಾರಿ ಹಿಟ್ ಅಂಡ್ ರನ್ ಗೆ ಸ್ಥಳದಲ್ಲೇ ವ್ಯಕ್ತಿ ಬಲಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಮಗೊಂಡ್ಲು ಹೋಬಳಿಯ ಮದ್ದೇನಹಳ್ಳಿ ನಿವಾಸಿ ಸಿದ್ದಗಂಗಯ್ಯ (55) ಮೃತ ದುರ್ದೈವಿ. ಹಿಂಬದಿಯಿಂದ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ರಭಸವಾಗಿ ಡಿಕ್ಕಿ ಕಾರು ನಿಲ್ಲಸದೆ ಸ್ಥಳದಿಂದ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಗುದ್ದಿದ ಮೇಲೆ 20 ಅಡಿ ದ್ವಿಚಕ್ರ ವಾಹನವನ್ನು ಎಳೆದೊಯ್ದ ವ್ಯಕ್ತಿಗೆ ಇನ್ನಷ್ಟು ಗಾಯಗೊಳಿಸಲಾಗಿದೆ. ಸದ್ಯ ಶವವನ್ನು ನೆಲಮಂಗಲ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ತ್ಯಾಮಗೊಂಡ್ಲು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Read More

ರೈತರ ಜಮೀನಿಗೆ ವೈಜ್ಞಾನಿಕ ದರ ನೀಡದಿದ್ದರೆ ಕಾನೂನು ಹೋರಾಟ: ಜೆಡಿಎಸ್ ರಾಜ್ಯಕಾರ್ಯದರ್ಶಿ ಹರೀಶ್ ಗೌಡ ಎಚ್ಚರಿಕೆ…

ದೊಡ್ಡಬಳ್ಳಾಪುರ:ರೈತರ ಫಲವತ್ತಾದ ಭೂಮಿಗೆ ವೈಜ್ಞಾನಿಕ ದರ ನೀಡುವಂತೆ ಒತ್ತಾಯಿಸಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮನವಿ ಮಾಡಿದ್ದು, ಫೆ.5ರೊಳಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ ಹೇಳಿದರು. ಕೊನಘಟ್ಟದ ಕಾಮನಬಂಡೆ ಸಮೀಪ ಕೊನಘಟ್ಟ, ನಾಗದೇನಹಳ್ಳಿ, ಕೋಡಿಹಳ್ಳಿ ಹಾಗೂ ಆದಿನಾರಾಯಣಹೊಸಹಳ್ಳಿ ರೈತರು ಕೆಐಎಡಿಬಿ ವಿರುದ್ಧ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಳೆದ ವಾರದಿಂದ ಈವರೆಗೆ ಕೆಐಎಡಿಬಿ ಅಧಿಕಾರಿಗಳು, ಮುಖ್ಯಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ರೈತರ ಹೋರಾಟ, ಬೇಡಿಕೆ ಕುರಿತು‌ ಮನವರಿಕೆ ಮಾಡಿಕೊಡಲಾಗಿದೆ. ಜ.31 ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ‌ ಮಾಡಿ‌ ರೈತರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದೇವೆ. ಕೆಐಎಡಿಬಿ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಖುದ್ದು ಕುಮಾರಸ್ವಾಮಿಯವರೇ ರೈತರ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಅಧಿಕಾರಿಗಳಿಗೆ ಸಾಕಷ್ಟು ಮನವಿ‌ ಕೊಟ್ಟಾಗ ಭೂಸ್ವಾಧೀನ…

Read More

ಪೋಲೀಸರ ಅತಿಥಿಗಳಾದ ಅಕ್ರಮ ಚಿನ್ನ ಸಾಗಣೆಗಾರರು…

ಚಿನ್ನದ ಪೇಸ್ಟ್ ಹಾಗೂ ಪುಡಿಯನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು 47.89 ಲಕ್ಷ ಮೌಲ್ಯದ 777.5 ಗ್ರಾಂ ಚಿನ್ನದ ಪೇಸ್ಟ್ ನ್ನು ಮೊಣಕಾಲಿನ ಕ್ಯಾಪ್ ನಲ್ಲಿ ಮೆರೆಮಾಚಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಏರ್ ಪ್ರಯಾಣಿಕನನ್ನ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಸಿಂಗಾಪುರ್ ಏರ್ಲೈನ್ಸ್ SQ510 ಮೂಲಕ KIAL ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನನ್ನ ತಪಾಸಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ವಿಚಾರಣೆ ಮುಂದುವರಿಸಲಾಗಿದೆ. ಅದೇರೀತಿ ಜ.28ರಂದು ಜೆಡ್ಡಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನ ತಪಾಸಣೆಗೆ ಒಳಪಡಿಸಿದಾಗ 7,52,875 ಮೌಲ್ಯದ 122.22 ಗ್ರಾಂ ಚಿನ್ನದ ಪುಡಿಯನ್ನು ಮೇಣದೊಂದಿಗೆ ಬೆರೆಸಿ ನೀರಿನ ಫ್ಲಾಸ್ಕ್ ನ ಸುತ್ತು ಅಂಟಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಕೂಡಲೇ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನ ವಶಕ್ಕೆ ಪಡೆದು ಚಿನ್ನದ ಪುಡಿಯನ್ನ ಜಪ್ತಿ…

Read More

ಶಿಕ್ಷಕಿ‌ ಕೊಲೆ ಮಾಡಿ ಹೂತಿಟ್ಟ ಭೂಪ..ಅಕ್ಕ ಅಕ್ಕ ಎಂದೇ ಕೊಲೆ ಮಾಡಿದನ ಭೂಪ…

ಕೊಲೆ ಮಾಡಿ ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ಅತಿಥಿ ಶಿಕ್ಷಕಿಯ ಮೃತದೇಹ ಪತ್ತೆ: ದುಷ್ಕರ್ಮಿಗಳಿಂದ ಕೊಲೆಯಾಗಿರೋ ಶಂಕೆ ಕೊಲೆ ಮಾಡಿ ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ಅತಿಥಿ ಶಿಕ್ಷಕಿಯ ಮೃತದೇಹವು ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಯೋಗಾ ನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ. ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆ.ಮಾಣಿಕ್ಯನಹಳ್ಳಿಯ ವೆಂಕಟೇಶ್ ಮಗಳಾದ ದೀಪಿಕಾ(28), ಕೊಲೆಯಾಗಿರುವ ಅತಿಥಿ ಶಿಕ್ಷಕಿ. ಮಾಣಿಕ್ಯನಹಳ್ಳಿ ಗ್ರಾಮದ ಲೋಕೇಶ್ ಎಂಬಾತನಿಗೆ ದೀಪಿಕಾಳನ್ನ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ 8 ವರ್ಷದ ಮಗು ಸಹ ಇದೆ. ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ‌ಮಾಡುತ್ತಿದ್ದರು. ಕಳೆದ ಶನಿವಾರ ಮಧ್ಯಾಹ್ನ ತರಗತಿ ಮುಗಿಸಿ ಬೈಕ್ ನಲ್ಲಿ ವಾಪಸ್ ಮನೆಗೆ ಹೋಗಿದ್ದರು. ಶನಿವಾರ ಸಂಜೆ ವೇಳೆ ಸ್ಕೂಟರ್ ಯೋಗಾ ನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಇರುವುದನ್ನ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂದು ಪೊಲೀಸರು ಸ್ಕೂಟರ್…

Read More

ಮತ್ತೆ ಖತರ್ನಾಕ್ ಇರಾನಿ ಗ್ಯಾಂಗ್ ಆಕ್ಟೀವ್: ಒಂಟಿ ಮಹಿಳೆ ವೃದ್ಧರೇ ಇವರ ಟಾರ್ಗೆಟ್.

ಆನೇಕಲ್ ನಲ್ಲಿ ಮಿತಿಮೀರಿದ ಇರಾನಿ ಗ್ಯಾಂಗ್ ಹಾವಳಿ: ಒಂದೇ ದಿನ 8 ಕಡೆ ಚೈನ್ ಸ್ನ್ಯಾಚಿಂಗ್ ಆನೇಕಲ್ ನಲ್ಲಿ ಇರಾನಿ ಗ್ಯಾಂಗ್ ಹಾವಳಿ ಮಿತಿಮೀರಿದ್ದು, ಸಿಕ್ಕ ಸಿಕ್ಕಲ್ಲಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಂದೇ ದಿನ 8 ಕಡೆ ಚೈನ್ ಸ್ನ್ಯಾಚಿಂಗ್ ನಡೆದಿದೆ. ಸರಣಿ ಸರಗಳ್ಳತನದಿಂದ ಆನೇಕಲ್ ಜನತೆ ಬೆಚ್ಚಿಬಿದ್ದಿದ್ದಾರೆ. ಬ್ಲ್ಯಾಕ್ ಅಂಡ್ ರೆಡ್ ಪಲ್ಸರ್ ಬೈಕ್ ಗಳಲ್ಲಿ ಬಂದು ಊರು ತುಂಬಾ ರೌಂಡ್ಸ್ ಹೊಡೆದು, ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರಗಳನ್ನ ಎಗರಿಸಿ ಪರಾರಿಯಾಗುತ್ತಿರುವ ಇರಾನಿ ಗ್ಯಾಂಗ್. ಆರೋಪಿಗಳ ವಿರುದ್ಧ ಜಿಗಣಿ, ಸೂರ್ಯನಗರ, ಅತ್ತಿಬೆಲೆ‌ ಮತ್ತು ತಮಿಳುನಾಡಿನ ಹೊಸೂರಿನಲ್ಲಿ ದೂರು ದಾಖಲಾಗಿದೆ.

Read More